ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ಮಾರ್ಚ್ 11 ಕ್ಕೆ ರಿಲೀಸ್ ಆಗಲಿದೆ. ಅಂದರೆ ಯುವರತ್ನ, ಕೋಟಿಗೊಬ್ಬ 3 ಸಿನಿಮಾಗಿಂತ ಮೊದಲೇ ರಾಬರ್ಟ್ ತೆರೆ ಕಾಣಲಿದೆ.ಮಾರ್ಚ್ 11 ರಂದು ಮಹಾಶಿವರಾತ್ರಿ ಹಬ್ಬವಿದ್ದು, ಈ ವಿಶೇಷ ದಿನಕ್ಕೆ ಚಿತ್ರ ತೆರೆ ಕಾಣಲಿದೆ. ಇನ್ನು, ಇಂದು ಫೇಸ್ ಬುಕ್ ನಲ್ಲಿ ಲೈವ್ ಬಂದಿರುವ ದರ್ಶನ್ ಈ ಬಾರಿ ತಮ್ಮ ಹುಟ್ಟುಹಬ್ಬವನ್ನು ಸಾರ್ವಜನಿಕವಾಗಿ ಆಚರಿಸಿಕೊಳ್ಳಲ್ಲ ಎಂದಿದ್ದಾರೆ. ಯಾರೂ ಮನೆ ಬಳಿ ಬರಬೇಡಿ.