ಸ್ಟಾರ್ ನಟನ ಮೇಲೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅನುಮಾನ

ಬೆಂಗಳೂರು| Krishnaveni K| Last Modified ಶುಕ್ರವಾರ, 16 ಜುಲೈ 2021 (09:21 IST)
ಬೆಂಗಳೂರು: ತಮ್ಮ ವಿರುದ್ಧ ನಿರ್ದೇಶಕ ಇಂದ್ರಜಿತ್ ಲಂಕೇಶ್ ಹಲ್ಲೆ ಆರೋಪ ಮಾಡಿರುವುದರ ಹಿಂದೆ ಒಬ್ಬ ಸ್ಟಾರ್ ನಟನ ಕೈವಾಡವಿರಬೇಕು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಆರೋಪಿಸಿದ್ದಾರೆ.  
> ಮಾಧ್ಯಮಗಳ ಮುಂದೆ ತಮ್ಮ ಅನುಮಾನ ಹೊರಹಾಕಿರುವ ದರ್ಶನ್, ‘ಇಂದ್ರಜಿತ್ ಇಷ್ಟೆಲ್ಲಾ ಮಾತನಾಡುತ್ತಿದ್ದಾರೆ ಎಂದರೆ ಅವರ ಹಿಂದೆ ಯಾರೋ ಎಕ್ಸ್ ವೈ ಝೆಡ್.. ಇರಲೇಬೇಕು. ಯಾರೋ ಸ್ಟಾರ್ ನಟರೇ ಅವರಿಗೆ ಕುಮ್ಮಕ್ಕು ನೀಡುತ್ತಿರಬೇಕು’ ಎಂದಿದ್ದಾರೆ.>   ವಂಚನೆ ಪ್ರಕರಣದ ಬಳಿಕ ಇದೀಗ ಹಲ್ಲೆ ಆರೋಪ ಮಾಡಿದ್ದು, ತಮ್ಮ ಮೇಲೆ ನಡೆದಿರುವ ವ್ಯವಸ್ಥಿತ ಸಂಚು ಎಂದು ದರ್ಶನ್  ಆರೋಪಿಸಿದ್ದಾರೆ. ಹೀಗಾಗಿ ಆ ಸ್ಟಾರ್ ನಟ ಯಾರು ಎಂಬ ಅನುಮಾನ ಈಗ ಎಲ್ಲರ ತಲೆಯಲ್ಲಿ ಶುರುವಾಗಿದೆ.ಇದರಲ್ಲಿ ಇನ್ನಷ್ಟು ಓದಿ :