Photo Courtesy: Twitterಬೆಂಗಳೂರು: ಮಾಧ್ಯಮಗಳೊಂದಿಗೆ ಮುನಿಸಿಗೆ ತೆರೆ ಎಳೆದು, ಸುಮಲತಾ ಅಂಬರೀಶ್ ಪಾರ್ಟಿಯಲ್ಲಿ ಕಿಚ್ಚ ಸುದೀಪ್ ಜೊತೆ ವೇದಿಕೆ ಹಂಚಿಕೊಂಡ ಮೇಲೆ ನಟ ದರ್ಶನ್ ಕಳೆದ ಎರಡು ದಿನಗಳಿಂದ ಸೋಷಿಯಲ್ ಮೀಡಿಯಾದಲ್ಲಿ ಪ್ರಕಟಿಸಿರುವ ಫೋಟೋ ಭಾರೀ ಚರ್ಚೆಗೆ ಕಾರಣವಾಗಿದೆ.ಸುಮಲತಾ ಪಾರ್ಟಿಯಲ್ಲಿ ಭಾಗವಹಿಸಿದ ತಕ್ಷಣವೇ ದರ್ಶನ್ ಜೋಡೆತ್ತುಗಳೊಂದಿಗಿನ ಫೋಟೋ ಪ್ರಕಟಿಸಿ, ಕಾಲಾಯ ತಸ್ಮೈ ನಮಃ ಎಂಬ ಸಂದೇಶ ಬರೆದಿದ್ದರು. ಈ ಮೂಲಕ ಕಿಚ್ಚನ ಜೊತೆಗಿನ ಮುನಿಸು ಮರೆತಿರುವುದನ್ನು ಪರೋಕ್ಷವಾಗಿ ಸುಳಿವು ನೀಡಿದ್ದಾರೆ