ಬೆಂಗಳೂರು: ತಮ್ಮ ಅಭಿಮಾನಿಗಳಿಂದ ನೋವುಂಟಾಗಿದ್ದಕ್ಕೆ ಹಿರಿಯ ನಟ ಜಗ್ಗೇಶ್ ಕ್ಷಮೆ ಯಾಚಿಸುತ್ತೇನೆ ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳಿಕೆ ನೀಡಿದ್ದಾರೆ. ದರ್ಶನ್ ಕ್ಷಮೆ ಯಾಚನೆಯನ್ನು ಟ್ವಿಟರ್ ಮೂಲಕ ಜಗ್ಗೇಶ್ ಸ್ವಾಗತಿಸಿದ್ದಾರೆ.ಮೈಸೂರಿನಲ್ಲಿ ಚಿತ್ರೀಕರಣ ವೇಳೆ ತಮ್ಮ ಅಭಿಮಾನಿಗಳ ಗುಂಪು ಜಗ್ಗೇಶ್ ಗೆ ಮುತ್ತಿಗೆ ಹಾಕಿದ ಘಟನೆ ಬಗ್ಗೆ ಜಗ್ಗೇಶ್ ತೀರಾ ಬೇಸರ ವ್ಯಕ್ತಪಡಿಸಿದ್ದರು. ಈ ಘಟನೆ ಕಳೆದ ಎರಡು ದಿನಗಳಿಂದ ಗೊಂದಲದ ವಾತಾವರಣ ಸೃಷ್ಟಿಸಿತ್ತು. ಇದೀಗ ದರ್ಶನ್ ಬಹಿರಂಗವಾಗಿ ಕ್ಷಮೆ ಕೇಳುವ