ಇಟೆಲಿಯವರು ಮಾಡಿದ ತಪ್ಪನ್ನು ನಾವು ಮಾಡದೇ ಇರೋಣ: ಡಿ ಬಾಸ್ ದರ್ಶನ್

ಬೆಂಗಳೂರು| Krishnaveni K| Last Modified ಮಂಗಳವಾರ, 24 ಮಾರ್ಚ್ 2020 (09:54 IST)
ಬೆಂಗಳೂರು: ಕೊರೋನಾವೈರಸ್ ಹರಡುತ್ತಿರುವುದರಿಂದ ಸೆಲೆಬ್ರಿಟಿಗಳೂ ತಮ್ಮ ಸಾಮಾಜಿಕ ಜಾಲತಾಣದ ಮೂಲಕ ಅಭಿಮಾನಿಗಳಲ್ಲಿ ಜಾಗೃತಿ ಮೂಡಿಸುವ ಕೆಲಸ ಮಾಡುತ್ತಿದ್ದಾರೆ.

 
ತಮ್ಮ ಸಾಮಾಜಿಕ ಜಾಲತಾಣ ಪುಟದಲ್ಲಿ ಅಭಿಮಾನಿಗಳಿಗೆ ಜಾಗೃತರಾಗಿರುವಂತೆ ಕರೆ ನೀಡಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್, ಇಟೆಲಿ, ಸ್ಪೇನ್ ನವರು ಮಾಡಿದ ತಪ್ಪನ್ನು ನಾವು ಮಾಡೋದು ಬೇಡ. ರೋಗ ಹರಡದಂತೆ ಮನೆಯಲ್ಲೇ ಕೂತು ಎಚ್ಚರಿಕೆ ವಹಿಸೋಣ ಎಂದಿದ್ದಾರೆ.
 
ಹಬ್ಬ ಎಂದು ಅಲ್ಲಿ ಇಲ್ಲಿ ತಿರುಗಾಡಬೇಡಿ.ಈ ರೀತಿ ಮಾಡಿದರೆ ಇಡೀ ದೇಶವೇ ಮಾರಣ ಹೋಮಕ್ಕೆ ತುತ್ತಾಗುತ್ತದೆ. ಮನೆಯಲ್ಲೇ ಇದ್ದು ದೇಶದ ಹಿತಕ್ಕಾಗಿ ನಿಯಮಗಳನ್ನು ಪಾಲಿಸಿ ಎಂದು ದರ್ಶನ್ ಕರೆ ನೀಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :