ಬೆಂಗಳೂರು : ಸ್ಯಾಂಡಲ್ ವುಡ್ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರಿಗೆ ಕನ್ನಡದ ಮೇಲೆ ಎಷ್ಟು ಅಭಿಮಾನ ಇದೆ ಎಂಬುದು ಎಲ್ಲರಿಗೂ ತಿಳಿದೆ ಇದೆ. ಈ ಹಿಂದೆ ಹೈದರಾಬಾದ್ ನ ಹೋಟೆಲ್ವೊಂದರಲ್ಲಿ ಕನ್ನಡ ಚಾನೆಲ್ ಬರದೇ ಇದ್ದಕ್ಕೆ ಗರಂ ಆಗಿದ್ದ ದರ್ಶನ್ ಅವರು ಇತ್ತಿಚೆಗೆ ದೂರದ ಗಡಿಯಲ್ಲಿರುವ ಕನ್ನಡ ಶಾಲೆಯ ಮಕ್ಕಳಿಗೆ ಸಹಾಯ ಹಸ್ತವನ್ನು ನೀಡಿವುದರ ಮೂಲಕ ಕನ್ನಡಪ್ರೇಮವನ್ನು ನಿರೂಪಿಸಿದ್ದಾರೆ.