Widgets Magazine

ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಜನ್ಮದಿನದ ಸಂಭ್ರಮ

ಬೆಂಗಳೂರು| Krishnaveni K| Last Modified ಭಾನುವಾರ, 16 ಫೆಬ್ರವರಿ 2020 (09:14 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್, ಅಭಿಮಾನಿಗಳ ಪ್ರೀತಿಯ ಡಿ ಬಾಸ್ ಗೆ ಇಂದು ಜನ್ಮದಿನದ ಸಂಭ್ರಮ. ಹೀಗಾಗಿ ಮಧ್ಯರಾತ್ರಿಯಿಂದಲೇ ಅಭಿಮಾನಿಗಳು ದರ್ಶನ್ ಗೆ ಶುಭ ಕೋರಲು ಮನೆ ಬಳಿ ಆಗಮಿಸುತ್ತಿದ್ದಾರೆ.

 
ದರ್ಶನ್ ಬರ್ತ್ ಡೇಗೆ ಅಭಿಮಾನಿಗಳಿಗೆ ‘ರಾಬರ್ಟ್’ ಚಿತ್ರತಂಡ ಉಡುಗೊರೆ ನೀಡಿದ್ದು, ಮಧ್ಯರಾತ್ರಿ ಟೀಸರ್ ಲಾಂಚ್ ಮಾಡಿದೆ. ದರ್ಶನ್ ರಗಡ್ ಲುಕ್ ಅಭಿಮಾನಿಗಳಿಗೂ ಇಷ್ಟವಾಗಿದೆ.
 
ಇನ್ನು, ಇಂದು ಜನ್ಮದಿನದ ಪ್ರಯುಕ್ತ ದರ್ಶನ್ ಮನೆ ಬಳಿ ಅನ್ನದಾನ ನಡೆಯುತ್ತಿದ್ದು, ಮನೆಗೆ ಬರುವ ಅಭಿಮಾನಿಗಳಿಗೆ ಭರ್ಜರಿ ಸಿಹಿ ಊಟ ಸಿದ್ಧವಿದೆ. ಇದಲ್ಲದೆ ರಾಜ್ಯದ ವಿವಿದೆಡೆ ದರ್ಶನ್ ಅಭಿಮಾನಿಗಳು ಹಲವು ಸಾಮಾಜಿಕ ಕಾರ್ಯಗಳ ಮೂಲಕವೂ ತಮ್ಮ ನೆಚ್ಚಿನ ನಟನ ಜನ್ಮದಿನವನ್ನು ಅದ್ಧೂರಿಯಾಗಿಯೇ ಆಚರಿಸಿಕೊಳ್ಳುತ್ತಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :