ಕಬಿನಿಯಲ್ಲಿ ಸಫಾರಿ: ಹುಲಿ ಸೆರೆಹಿಡಿದ ಚಾಲೆಂಜಿಂಗ್ ಸ್ಟಾರ್ ದರ್ಶನ್!

ಬೆಂಗಳೂರು| Krishnaveni K| Last Modified ಬುಧವಾರ, 13 ಜನವರಿ 2021 (09:20 IST)
ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಬಿಡುವಿದ್ದಾಗಲೆಲ್ಲಾ ವನ್ಯ ಜೀವಿಗಳ ಫೋಟೋಗ್ರಫಿ ಮಾಡಲು ಸಫಾರಿ ಮಾಡುತ್ತಾರೆ. ಇದೀಗ ದರ್ಶನ್ ಕಬಿನಿಯಲ್ಲಿ ಸಫಾರಿ ಮಾಡುತ್ತಿದ್ದಾರೆ.
 

ಈ ನಡುವೆ ತಮ್ಮ ಕ್ಯಾಮರಾದಲ್ಲಿ ಹುಲಿಯೊಂದನ್ನು ಸೆರೆಹಿಡಿಯತ್ತಿರುವ ದೃಶ್ಯಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೈಸೂರು ಜಿಲ್ಲೆ ಎಚ್ ಡಿ ಕೋಟೆ ತಾಲೂಕು ನಾಗರಹೊಳೆಯ ಕಬಿನಿಯಲ್ಲಿ ತಮ್ಮ ಸಂಗಡಿಗರೊಂದಿಗೆ ದರ್ಶನ್ ಸಫಾರಿ ಮಾಡುತ್ತಿದ್ದಾರೆ. ಸದ್ಯಕ್ಕೆ ಶೂಟಿಂಗ್ ನಿಂದ ಬ್ರೇಕ್ ನಲ್ಲಿರುವ ಡಿ ಬಾಸ್ ತಮ್ಮ ಮೆಚ್ಚಿನ ಹವ್ಯಾಸದಲ್ಲಿ ತೊಡಗಿಸಿಕೊಂಡಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :