ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಗೆ ಇಂದು ಜನ್ಮದಿನದ ಸಂಭ್ರಮ. ಆದರೆ ಕೊರೋನಾ ಕಾರಣದಿಂದ ಈ ಬಾರಿ ಹುಟ್ಟುಹಬ್ಬವನ್ನು ಅಭಿಮಾನಿಗಳೊಂದಿಗೆ ಆಚರಿಸದೇ ಇರಲು ಡಿ ಬಾಸ್ ತೀರ್ಮಾನಿಸಿದ್ದಾರೆ.ಕಳೆದ ವರ್ಷವೂ ಸರಳವಾಗಿ ಹುಟ್ಟುಹಬ್ಬ ಆಚರಿಸಿಕೊಂಡಿದ್ದ ದರ್ಶನ್ ಆಹಾರ ಸಾಮಗ್ರಿಗಗಳನ್ನು ಅಭಿಮಾನಿಗಳಿಂದ ಸಂಗ್ರಹಿಸಿ ಅರ್ಹರಿಗೆ ತಲುಪಿಸುವ ಸಮಾಜಮುಖೀ ಕೆಲಸ ಮಾಡಿದ್ದರು. ಈ ಬಾರಿ ಕೊರೋನಾ ಕಾರಣದಿಂದ ಈಗಾಗಲೇ ಬರ್ತ್ ಡೇ ದಿನ ನಾನು ಮನೆಯಲ್ಲಿರಲ್ಲ. ಮನೆ ಬಳಿ ಬರಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.