ಬೆಂಗಳೂರು: ಕೆಜಿಎಫ್ 1 ರ ಬಳಿಕ ಮತ್ತೊಂದು ಕನ್ನಡ ಚಿತ್ರ ನೂರು ಕೋಟಿ ಕ್ಲಬ್ ಸೇರಿದೆ. ಇದೀಗ ಚಾಲೆಂಜಿಂಗ್ ಸ್ಟಾರ್ ದರ್ಶನ್ ದುರ್ಯೋಧನನಾಗಿ ಅಭಿನಯಿಸಿದ ಬಹುತಾರಾಗಣದ ಕುರುಕ್ಷೇತ್ರ ಸಿನಿಮಾ ಈಗ 100 ಕೋಟಿ ಕ್ಲಬ್ ಸೇರಿದೆ ಎಂಬ ಮಾಹಿತಿ ಬಂದಿದೆ.ಕೆಜಿಎಫ್ ನಂತರ ಕನ್ನಡ ಚಿತ್ರವೊಂದು ಈ ಮಟ್ಟಿಗಿನ ಯಶಸ್ಸು ಕಾಣುತ್ತಿರುವುದು ಇದು ಎರಡನೇ ಬಾರಿ ಎನ್ನಬಹುದು. ಇದೀಗ ಚಿತ್ರದ ಯಶಸ್ಸನ್ನು ಡಿ ಬಾಸ್ ದರ್ಶನ್ ಅಭಿಮಾನಿಗಳ ಜತೆ ಕೇಕ್ ಕತ್ತರಿಸಿ