ಬೆಂಗಳೂರು: ಲಾಕ್ ಡೌನ್ ಘೋಷಣೆಯಾದಾಗಿನಿಂದ ಎಷ್ಟೋ ಮಂದಿ ಊಟವಿಲ್ಲದೇ ಪರದಾಡುತ್ತಿದ್ದಾರೆ. ಅಂತಹವರಿಗೆ ತಮ್ಮ ಕೈಲಾದ ಸಹಾಯ ಮಾಡಲು ಎಷ್ಟೋ ಸ್ಟಾರ್ ನಟರು ಮುಂದೆ ಬಂದಿದ್ದರು.ಆದರೆ ಮೈಸೂರಿನಲ್ಲಿ ನಟ ದರ್ಶನ್ ಹೆಸರಿನಲ್ಲಿ ನಡೆಯುತ್ತಿರುವ ಅನ್ನದಾನ ಸೇವೆ ಮಾತ್ರ ಮೆಚ್ಚುವಂತಹದ್ದು. ಮೈಸೂರಿನ ದರ್ಶನ್ ಅಭಿಮಾನಿಗಳ ಬಳಗ ನಿರಂತರವಾಗಿ ಈಗಲೂ ಹಸಿದಿರುವ ಬಡವರಿಗೆ ಹಗಲು-ರಾತ್ರಿ ಊಟದ ವ್ಯವಸ್ಥೆ ಮಾಡುತ್ತಲೇ ಇದ್ದಾರೆ.ಅದೂ ಎಲ್ಲಾ ರೀತಿಯ ಶುಚಿತ್ವ, ಸಾಮಾಜಿಕ ಅಂತರ ಕಾಯ್ದುಕೊಂಡು ನಿರಂತರವಾಗಿ ಬಡವರ ಹೊಟ್ಟೆ ತುಂಬಿಸುತ್ತಿದ್ದಾರೆ.