Widgets Magazine

ಕ್ಯಾಮರಾ ಹಿಡಿದು ಮತ್ತೆ ಕಾಡಿಗೆ ಹೊರಟ ನಟ ದರ್ಶನ್

ಬೆಂಗಳೂರು| Krishnaveni K| Last Modified ಸೋಮವಾರ, 27 ಜನವರಿ 2020 (10:53 IST)
ಬೆಂಗಳೂರು: ರಾಬರ್ಟ್ ಚಿತ್ರೀಕರಣದ ಬಳಿಕ ಸಿಕ್ಕ ಕಿರು  ಅವಧಿಯ ಬಿಡುವಿನ ವೇಳೆಯನ್ನು ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರಿಯಾಗಿಯೇ ಸದುಪಯೋಗಪಡಿಸಿಕೊಳ್ಳುತ್ತಿದ್ದಾರೆ.

 
ಸಿನಿಮಾದಿಂದ ಬಿಡುವು ಸಿಕ್ಕಾಗಲೆಲ್ಲಾ ತಮ್ಮ ಫಾರ್ಮ್ ಹೌಸ್ ಅಥವಾ ನೆಚ್ಚಿನ ಪ್ರಾಣಿಗಳ ಜತೆ ಕಾಲ ಕಳೆಯುವ ದರ್ಶನ್ ಇದೀಗ ಮತ್ತೆ ಕಾನನದ ಕಡೆಗೆ ಪ್ರಯಾಣ ಬೆಳೆಸಿದ್ದಾರೆ. ದರ್ಶನ್ ಗೆ ಇಷ್ಟದ ಹವ್ಯಾಸವೆಂದರೆ ವೈಲ್ಡ್ ಲೈಫ್ ಫೋಟೋಗ್ರಫಿ. ಈ ಹಿಂದೊಮ್ಮೆ ತಾವು ಸೆರೆ ಹಿಡಿದ ಅಪರೂಪದ ಫೋಟೋಗಳನ್ನು ಪ್ರದರ್ಶನಕ್ಕಿಟ್ಟು ಅದರಿಂದ ಬಂದ ಹಣವನ್ನು ವನ್ಯ ಜೀವಿಗಳ ನೆರವಿಗೆ ನೀಡಿದ್ದರು ದರ್ಶನ್.
 
ಇದೀಗ ಮತ್ತೆ ಕ್ಯಾಮರಾ ಹಿಡಿದು ಫೋಟೋಗ್ರಫಿಗೆ ಹೊರಟಿದ್ದಾರೆ. ಕಾಡಿನ ಮಧ್ಯೆ ಕ್ಯಾಮರಾ ಹಿಡಿದು ಕುಳಿತಿರುವ ಫೋಟೋವೊಂದನ್ನು ತಮ್ಮ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿರುವ ದರ್ಶನ್ ಗಣರಾಜ್ಯೋತ್ಸವದ ಶುಭ ಕೋರಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :