ಮೈಸೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ಸಮಯ ಸಿಕ್ಕಾಗಲೆಲ್ಲಾ ತಮ್ಮ ತೋಟದ ಮನೆಯಲ್ಲಿ ಇಷ್ಟದ ಪ್ರಾಣಿ ಪಕ್ಷಿಗಳ ಜತೆ ಸಮಯ ಕಳೆಯುತ್ತಾರೆ. ಈಗ ಕೊರೋನಾ ಸಮಯದಲ್ಲೂ ಇದನ್ನೇ ಮಾಡುತ್ತಿದ್ದಾರೆ. ಲಾಕ್ ಡೌನ್ ನಿಂದಾಗಿ ಚಿತ್ರೀಕರಣ, ಸಿನಿಮಾ ಕೆಲಸಗಳು ಸ್ಥಗಿತಗೊಂಡಿವೆ. ಹೀಗಾಗಿ ದರ್ಶನ್ ಈಗ ತೋಟದ ಮನೆಯಲ್ಲಿ ತಮ್ಮಿಷ್ಟದ ಪ್ರಾಣಿಗಳ ಜತೆ ಸಮಯ ಕಳೆಯುತ್ತಿದ್ದಾರೆ.ಇದೀಗ ದರ್ಶನ್ ತಮ್ಮ ನೆಚ್ಚಿನ ಬಿಳಿ ಕುದುರೆಯ ಜತೆ ಸವಾರಿ ಮಾಡುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.