ಇತ್ತೀಚಿನ ದಿನಗಳಲ್ಲಿ ಕೌಟುಂಬಿಕ ಕಥಾ ಹಂದರದ ಸಿನಿಮಾಗಳ ಸಂಖ್ಯೆ ಕಡಿಮೆಯಾಗುತ್ತಿದೆ ಎಂಬ ಕೊರಗೊಂದು ಪ್ರೇಕ್ಷಕರನ್ನು ಸದಾ ಕಾಡುತ್ತಲೇ ಇದೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಕೌಟುಂಬಿಕ ಕಥಾ ಹಂದರದ ಸಿನಿಮಾಗಳಲ್ಲಿ ನಟಿಸಬೇಕೆಂಬುದಂತೂ ಅಭಿಮಾನಿಗಳನ್ನು ಯಾವತ್ತಿಗೂ ಆವರಿಸಿಕೊಂಡಿರೋ ಬಯಕೆ. ಅಂಥವರಿಗೆಲ್ಲ ಈ ವರ್ಷ ಡಬಲ್ ಧಮಾಕಾ. ಯಾಕೆಂದರೆ, ಈ ವರ್ಷ ದರ್ಶನ್ ಯಜಮಾನ ಎಂಬ ಫ್ಯಾಮಿಲಿ ಕಥಾನಕದಲ್ಲಿ ನಟಿಸಿದ್ದರು. ಆ ಚಿತ್ರ ಸೂಪರ್ ಹಿಟ್ ಆಗಿದ್ದೀಗ ಇತಿಹಾಸ. ಅವರೀಗ ಎರಡನೇ ಸಲ ಒಡೆಯ