ಬೆಂಗಳೂರು: ಕರ್ನಾಟಕದಲ್ಲಿ ಕನ್ನಡ ಸಿನಿಮಾಗಳಿಗೆ ಮೊದಲ ಆದ್ಯತೆಯಿರಬೇಕು ಎಂದು ಚಾಲೆಂಜಿಂಗ್ ಸ್ಟಾರ್ ದರ್ಶನ್ ಹೇಳುತ್ತಲೇ ಬರುತ್ತಿದ್ದಾರೆ.ಇತ್ತೀಚೆಗೆ ಕಾವೇರಿ ವಿವಾದಕ್ಕೆ ಸಂಬಂಧಿಸಿದಂತೆ ಹೋರಾಟದಲ್ಲಿ ಭಾಗಿಯಾಗಿದ್ದಾಗ ಹೋರಾಟಕ್ಕೆ ಮಾತ್ರ ನಾವು ನೆನಪಾಗ್ತೀವಿ. ಸಿನಿಮಾ ಎಂದರೆ ಕನ್ನಡ ಸಿನಿಮಾವನ್ನೂ ಕಡೆಗಣಿಸಿ ತಮಿಳು, ತೆಲುಗು ಎಂದು ಪರಭಾಷೆ ಸಿನಿಮಾಗಳಿಗೆ ಕೋಟಿ ಕೋಟಿ ದುಡ್ಡು ಮಾಡಲು ಅವಕಾಶ ಕೊಡ್ತೀರಿ ಎಂದು ಆಕ್ಷೇಪಿಸಿದ್ದರು.ಇತ್ತೀಚೆಗೆ ನಡೆದ ಕೈವ ಸಿನಿಮಾ ಟ್ರೈಲರ್ ಲಾಂಚ್ ವೇಳೆಯೂ ದರ್ಶನ್ ಮತ್ತೆ ಇದೇ ಮಾತನ್ನು ಪುನರುಚ್ಚರಿಸಿದ್ದರು.