ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮಗೆ ಅಭಿಮಾನಿಗಳೇ ಸೆಲೆಬ್ರಿಟಿಗಳು ಎಂದವರು. ಇಂತಿಪ್ಪ ದರ್ಶನ್ ಇದೀಗ ತಮ್ಮ ಅಭಿಮಾನಿ ಬಾಲಕನ ಕನಸು ನನಸು ಮಾಡಿದ್ದಾರೆ. ಅನೇಕ ಬಾರಿ ಖಾಯಿಲೆಯಿಂದ ಬಳಲುತ್ತಿರುವ ಅಥವಾ ಜೀವನದ ಕೊನೆಯ ಹಂತದಲ್ಲಿರುವ ಅಭಿಮಾನಿಗಳ ಆಸೆ ನೆರವೇರಿಸಲು ದರ್ಶನ್ ನೇರವಾಗಿ ಅವರ ಬಳಿಗೇ ಹೋಗಿದ್ದಿದೆ. ಇದೀಗ ಅದೇ ರೀತಿ ಕಿಡ್ನಿ ವೈಫಲ್ಯದಿಂದ ಬಳಲುತ್ತಿರುವ ಬಾಲಕನೊಬ್ಬನ ಕನಸು ನನಸು ಮಾಡಿದ್ದಾರೆ.ಅಸೌಖ್ಯದಿಂದ ಬಳಲುತ್ತಿರುವ ಬಾಲಕ ರತನ್ ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿಮಾನಿ.