ಬೆಂಗಳೂರು: ಫೆಬ್ರವರಿ 16 ರಂದು ಹುಟ್ಟುಹಬ್ಬ ಆಚರಿಸಿಕೊಳ್ಳಲಿರುವ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇಂದು ದಿಡೀರ್ ವಿಡಿಯೋ ಪ್ರಕಟಿಸಿ ಅಭಿಮಾನಿಗಳಿಗೆ ಸಂದೇಶ ನೀಡಿದ್ದಾರೆ.ಈ ಬಾರಿಯೂ ಕೊರೋನಾ ಮತ್ತು ಪುನೀತ್ ರಾಜ್ ಕುಮಾರ್ ಅಗಲುವಿಕೆಯ ನೋವಿನ ಕಾರಣಕ್ಕೆ ಅದ್ಧೂರಿ ಬರ್ತ್ ಡೇ ಆಚರಣೆ ಇಲ್ಲ ಎಂದು ದರ್ಶನ್ ಹೇಳಿದ್ದು, ಈ ದಿನ ನಾನು ಮನೆಯಲ್ಲಿರಲ್ಲ. ಹಾಗಾಗಿ ಯಾರೂ ದೂರದ ಊರುಗಳಿಂದ ಮನೆ ಹತ್ರ ಬರಬೇಡಿ ಎಂದಿದ್ದಾರೆ.ಹಾಗಿದ್ದರೂ ತಮ್ಮ ಮೆಚ್ಚಿನ ಅಭಿಮಾನಿಗಳಿಗೆ ನಿರಾಸೆ ಮಾಡಲ್ಲ