ಬೆಂಗಳೂರು: ಚಾಲೆಂಜಿಂಗ್ ಸ್ಟಾರ್ ದರ್ಶನ್ ತಮ್ಮ ಹುಟ್ಟುಹಬ್ಬದ ಸಂದರ್ಭದಲ್ಲಿ ಮಾಡಿದ ಮನವಿಗೆ ಸ್ಪಂದಿಸಿದ ಎಷ್ಟೋ ಅಭಿಮಾನಿಗಳು ಅವರ ಮನೆಗೆ ಧವಸ-ಧಾನ್ಯಗಳನ್ನು ತಂದು ಉಡುಗೊರೆಯಾಗಿ ನೀಡಿದ್ದಾರೆ.ಈ ಸಾಮಗ್ರಿಗಳನ್ನು ಈಗ ದರ್ಶನ್ ತಮ್ಮ ಸಂಗಡಿಗರ ಮೂಲಕ ರಾಜ್ಯದ ಸುಮಾರು 60 ಕ್ಕೂ ಹೆಚ್ಚು ಅನಾಥಾಶ್ರಮ/ವೃದ್ಧಾಶ್ರಮಗಳಿಗೆ ತಲುಪಿಸುವ ವ್ಯವಸ್ಥೆ ಮಾಡುತ್ತಿದ್ದಾರೆ.ಆದರೆ ಈ ವಸ್ತುಗಳನ್ನು ಹಾಗೆಯೇ ಬಳಸಬೇಡಿ ಎಂದು ದರ್ಶನ್ ಪತ್ರ ಮುಖೇನ ಈ ಸಂಸ್ಥೆಗಳಿಗೆ ಮನವಿಯನ್ನೂ ಮಾಡಿದ್ದಾರೆ. ನನ್ನ ಹುಟ್ಟುಹಬ್ಬ ಪ್ರಯುಕ್ತ ಅಭಿಮಾನಿಗಳು ನೀಡಿದ