ಬೆಂಗಳೂರು: ಕೊರೋನಾವೈರಸ್ ನಿಂದಾಗಿ ಬಡವರಿಗೆ ಒಪ್ಪೊತ್ತಿನ ಊಟಕ್ಕೂ ಗತಿಯಿಲ್ಲದಂತಾಗಿದೆ. ಹೀಗಾಗಿ ಬಡವರಿಗೆ ನೆರವಾಗಲು ಚಾಲೆಂಜಿಂಗ್ ಸ್ಟಾರ್ ದರ್ಶನ್ ಮನವಿ ಮಾಡಿದ್ದಾರೆ. ತಮ್ಮ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ಬರೆದುಕೊಂಡಿರುವ ದರ್ಶನ್, ಈ ಸಮಯದಲ್ಲಿ ನಾನು ಸಣ್ಣದೊಂದು ಸಲಹೆ ನೀಡಲು ಬಯಸುತ್ತೇನೆ. ದಿನನಿತ್ಯ ನೀವು ಮಾಡುವ ಅಡುಗೆಯಲ್ಲಿ ಸ್ವಲ್ಪ ಹೆಚ್ಚು ಜನರಿಗಾಗುವಂತೆ ಮಾಡಿ ನಿಮ್ಮ ಅಕ್ಕಪಕ್ಕದ ಬಡಜನರಿಗೆ ಒಪ್ಪೊತ್ತು ಕೂಳಿಗಾದರೂ ನೆರವಾದರೆ ಒಳಿತು ಎಂಬುದು ನನ್ನ ಭಾವನೆ. ಸಾಧ್ಯವಾದಷ್ಟು ನಿಮ್ಮ ಕೈಲಾಗುವ