ಮುಂದಿನ ತಿಂಗಳಾಂತ್ಯಕ್ಕೆ ನಟ ದರ್ಶನ ಮನೆ ಸೇರಿದಂತೆ 69 ಮನೆಗಳನ್ನು ತೆರವುಗೊಳಿಸಲಾಗುವುದು ಎಂದು ಜಿಲ್ಲಾಧಿಕಾರಿ ವಿ.ಶಂಕರ್ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ರಾಜಕಾಲುವೆ ಮೇಲೆ ಮನೆಗಳನ್ನು ನಿರ್ಮಿಸಿ ನ್ಯಾಯಾಲಯದಿಂದ ತಡೆಯಾಜ್ಞೆ ತಂದಿದ್ದ ಮಾಲೀಕರಿಗೆ ಈಗಾಗಲೇ ನೋಟಿಸ್ ಜಾರಿಗೊಳಿಸಲಾಗಿದೆ. ಮುಂದಿನ ತಿಂಗಳೊಳಗಾಗಿ ಮನೆಗಳನ್ನುತೆರವುಗೊಳಿಸಲಾಗುವುದು ಎಂದು ತಿಳಿಸಿದ್ದಾರೆ. ಹಿರಿಯ ಕಾಂಗ್ರೆಸ್ ಮುಖಂಡ ಶಾಮನೂರ್ ಶಿವಂಶಂಕರಪ್ಪ ಅವರ ಆಸ್ಪತ್ರೆಯ ಕಟ್ಟಡ ಕೂಡಾ ತಡೆಯಾಜ್ಞೆ ಅವಧಿ ಮುಕ್ತಾಯಗೊಂಡ ನಂತರ ತೆರವುಗೊಳಿಸಲಾಗುವುದು ಎಂದು ಹೇಳಿದ್ದಾರೆ.