ಬೆಂಗಳೂರು: ಸುಮಲತಾ ಅಂಬರೀಶ್ ಸಂಸದೆಯಾಗಿ ಚುನಾವಣೆ ನಿಂತಾಗ ಜೋಡೆತ್ತುಗಳು ಎಂದು ಹೇಳಿಕೊಂಡು ಒಟ್ಟಿಗೇ ಪ್ರಚಾರ ನಡೆಸಿದವರು ರಾಕಿಂಗ್ ಸ್ಟಾರ್ ಯಶ್ ಮತ್ತು ಡಿ ಬಾಸ್ ದರ್ಶನ್. ಅಷ್ಟೇ ಏಕೆ ಮೊನ್ನೆ ಐರಾ ಯಶ್ ಬರ್ತ್ ಡೇ ಸಮಾರಂಭಕ್ಕೂ ದರ್ಶನ್ ಆಗಮಿಸಿ ತಮ್ಮಿಬ್ಬರ ಸ್ನೇಹ ಇನ್ನೂ ಗಟ್ಟಿಯಾಗಿದೆ ಎಂದು ಸಾರಿದ್ದರು.