ಬೆಂಗಳೂರು: ಡಾ.ರಾಜ್ ಕುಮಾರ್ ಮೊಮ್ಮಗ ಧ್ರುವನ್ ನಾಯಕರಾಗಿ ನಟಿಸಲಿರುವ ಹೊಸ ಸಿನಿಮಾ ಮುಹೂರ್ತ ಕಾರ್ಯಕ್ರಮ ನಿನ್ನೆ ನಗರದಲ್ಲಿ ನೆರವೇರಿದೆ.ವಿಶೇಷವೆಂದರೆ ಈ ಕಾರ್ಯಕ್ರಮದಲ್ಲಿ ಶಿವರಾಜ್ ಕುಮಾರ್ ಜತೆಗೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಒಟ್ಟಾಗಿ ಒಂದೇ ವೇದಿಕೆಯಲ್ಲಿ ಕಾಣಿಸಿಕೊಂಡಿದ್ದಾರೆ. ಮುಹೂರ್ತ ಕಾರ್ಯಕ್ರಮದಲ್ಲಿ ಶಿವಣ್ಣ ಕ್ಲಾಪ್ ಮಾಡಿದರೆ ದರ್ಶನ್ ಕ್ಯಾಮರಾ ಆನ್ ಮಾಡಿ ಚಿತ್ರಕ್ಕೆ ಶುಭ ಹಾರೈಸಿದರು.ಈ ವೇಳೆ ಒಟ್ಟಾಗಿ ಪೋಸ್ ನೀಡಿದ ಇಬ್ಬರು ದಿಗ್ಗಜ ಸ್ಟಾರ್ ಗಳು ಬಳಿಕ ಮಾಧ್ಯಮಗಳೊಂದಿಗೂ ಜತೆಯಾಗಿಯೇ ಮಾತನಾಡಿದರು.