ಬೆಂಗಳೂರು: ಏನೇ ಟೀಕೆ ಟಿಪ್ಪಣಿಗಳಿದ್ದರೂ ಚುನಾವಣೆ ಮುಗಿಯುವವರೆಗೆ ಮಾತ್ರ ಎನ್ನುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ಇದೀಗ ಚುನಾವಣೆ ಬಳಿಕವೂ ಸರ್ಕಾರಕ್ಕೆ ಪರೋಕ್ಷವಾಗಿ ಚಾಟಿ ಬೀಸಿದ್ದಾರೆ.ಸುಮಲತಾ ಅಂಬರೀಶ್ ಪರವಾಗಿ ಮಂಡ್ಯದಲ್ಲಿ ಪ್ರಚಾರ ಮಾಡುವಾಗ ದರ್ಶನ್ ಸಿಎಂ ಕುಮಾರಸ್ವಾಮಿಗೆ ಹಲವು ಬಾರಿ ಟಾಂಗ್ ಕೊಟ್ಟಿದ್ದರು. ಆದರೆ ಇದೀಗ ನಿನ್ನೆ ಬೆಂಗಳೂರಿನ ಕಾಲೇಜೊಂದಕ್ಕೆ ಅತಿಥಿಯಾಗಿ ಹೋಗಿದ್ದ ವೇಳೆ ಮಾತನಾಡುವಾಗ ಟಾಂಗ್ ನೀಡಿದ್ದಾರೆ.ವಿದ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ದರ್ಶನ್ ನಾನಂತೂ ಕಾಲೇಜಿಗೆ ಹೋಗಿಲ್ಲ. ನೀವಾದ್ರೂ ಹೋಗಿ ಚೆನ್ನಾಗಿ ಓದಿ