ಬೆಂಗಳೂರು: ಮಹಾಶಿವರಾತ್ರಿ ದಿನವಾದ ನಿನ್ನೆ ಸಂಜೆ ಕುರುಕ್ಷೇತ್ರ ಸಿನಿಮಾದ ಶತದಿನೋತ್ಸವವನ್ನು ಭರ್ಜರಿಯಾಗಿ ಆಚರಿಸಿಕೊಂಡ ನಿರ್ಮಾಪಕ ಮುನಿರತ್ನ ಎಲ್ಲರಿಗೂ ಖುಷಿಯಾಗುವ ಸುದ್ದಿಯೊಂದನ್ನು ಕೊಟ್ಟಿದ್ದಾರೆ. ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ಮುನಿರತ್ನ ಕಾಂಬಿನೇಷನ್ ನಲ್ಲಿ ಮತ್ತೊಂದು ಸಿನಿಮಾ ನಿರ್ಮಾಣವಾಗಲಿದ್ದು, ಅದು ನೈಜ ಘಟನೆಯನ್ನು ಆಧರಿಸಿದ್ದಾಗಿದೆ. ದೇಶದ ಹೆಮ್ಮೆಯ ವಿಂಗ್ ಕಮಾಂಡರ್ ಮೇಜರ್ ಅಭಿನಂದನ್ ಜೈನ್ ಕುರಿತಾದ ಸಿನಿಮಾವನ್ನು ನಿರ್ಮಾಣ ಮಾಡುತ್ತೇನೆ. ಅದರಲ್ಲಿ ದರ್ಶನ್ ಅಭಿನಂದನ್ ಜೈನ್ ಆಗಿ ಅಭಿನಯಿಸಲಿದ್ದಾರೆ. ಆ ಸಿನಿಮಾದಲ್ಲಿ ದರ್ಶನ್