ಬೆಂಗಳೂರು: ಮೈಸೂರಿನಲ್ಲಿ ಮದಗಜ ಸಿನಿಮಾ ಶೂಟಿಂಗ್ ನಲ್ಲಿರುವ ರೋರಿಂಗ್ ಸ್ಟಾರ್ ಶ್ರೀಮುರಳಿ ಮತ್ತು ಚಿತ್ರತಂಡಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ಸರ್ಪ್ರೈಸ್ ಕೊಟ್ಟಿದ್ದಾರೆ.ಮೈಸೂರಿನ ಚಾಮುಂಡೇಶ್ವರಿ ಬೆಟ್ಟಕ್ಕೆ ಭೇಟಿ ನೀಡಿದ ಡಿ ಬಾಸ್ ದರ್ಶನ್ ಪೂಜೆ ಸಲ್ಲಿಸಿ ಬಳಿಕ ಪಕ್ಕದಲ್ಲೇ ಶೂಟಿಂಗ್ ಮಾಡುತ್ತಿದ್ದ ಮದಗಜ ಚಿತ್ರದ ಸೆಟ್ ಗೆ ಭೇಟಿ ಕೊಟ್ಟಿದ್ದಾರೆ. ಅದೂ ಯಾರಿಗೂ ಸುಳಿವೇ ನೀಡದೇ ಸರ್ಪೈಸ್ ಕೊಟ್ಟಿದ್ದಾರೆ. ದರ್ಶನ್ ಅಭಿನಯದ ರಾಬರ್ಟ್ ಸಿನಿಮಾ ನಿರ್ಮಾಪಕ ಉಮಾಪತಿ ಗೌಡ ನಿರ್ಮಿಸುತ್ತಿರುವ ಸಿನಿಮಾ