ನಟಿ ಅಮೂಲ್ಯ ಬರ್ತ್ ಡೇಗೆ ‘ಅಂಕಲ್’ ದರ್ಶನ್ ವಿಶ್

ಬೆಂಗಳೂರು| Krishnaveni K| Last Modified ಮಂಗಳವಾರ, 14 ಸೆಪ್ಟಂಬರ್ 2021 (17:10 IST)
ಬೆಂಗಳೂರು: ಸ್ಯಾಂಡಲ್ ವುಡ್ ನಟಿ ಅಮೂಲ್ಯಗೆ ಇಂದು ಜನ್ಮದಿನದ ಸಂಭ್ರಮ. ಅವರ ಜನ್ಮದಿನಕ್ಕೆ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿಶೇಷವಾಗಿ ವಿಶ್ ಮಾಡಿದ್ದಾರೆ.

 
ಸಾಮಾನ್ಯವಾಗಿ ದರ್ಶನ್ ನಾಯಕಿ ನಟಿಯರಿಗೆ ವಿಶ್ ಮಾಡುವುದು ಅಪರೂಪ. ಆದರೆ ಕುಟುಂಬಸ್ಥರ ಜೊತೆಗೆ ದರ್ಶನ್ ಗೆ ಆತ್ಮೀಯ ಸಂಬಂಧವಿದೆ. ಅಮೂಲ್ಯ ಡಿ ಬಾಸ್ ರನ್ನು ‘ಅಂಕಲ್’ ಎಂದು ಕರೆಯುತ್ತಾರೆ ಎಂದು ಸ್ವತಃ ದರ್ಶನ್ ಹಿಂದೊಮ್ಮೆ ಸಂದರ್ಶನದಲ್ಲಿ ಕಾಲೆಳೆದಿದ್ದರು.
 
ಇದೀಗ ಅಮೂಲ್ಯ ಜೊತೆಗಿನ ಫೋಟೋ ಹಂಚಿಕೊಂಡಿರುವ ದರ್ಶನ್ ‘ಹುಟ್ಟುಹಬ್ಬದ ಶುಭಾಶಯಗಳು. ಆ ತಾಯಿ ಚಾಮುಂಡೇಶ್ವರಿ ಆಯಸ್ಸು ಆರೋಗ್ಯ ಕೊಟ್ಟು ಕಾಪಾಡಲಿ. ನಿಮ್ಮ ಎಲ್ಲಾ ಕೆಲಸದಲ್ಲೂ ಯಶಸ್ಸು ನಿಮ್ಮದಾಗಲಿ, ಯಾವಾಗಲೂ ನಗು ನಗುತ್ತಾ ಸಂತೋಷವಾಗಿರಿ’ ಎಂದು ಹಾರೈಸಿದ್ದಾರೆ.
ಇದರಲ್ಲಿ ಇನ್ನಷ್ಟು ಓದಿ :