ಬೆಂಗಳೂರು: ಬಿಗ್ ಬಾಸ್ ವಿಜೇತ ಶೈನ್ ಶೆಟ್ಟಿ ತಮ್ಮ ತಂಡದ ಜತೆಗೂಡಿ ಲಾಕ್ ಡೌನ್ ನಿಂದಾಗಿ ತೊಂದರೆಗೀಡಾದವರಿಗೆ ಆಹಾರ, ಅಗತ್ಯ ವಸ್ತು ಪೂರೈಸುತ್ತಿದ್ದಾರೆ. ಅವರದೇ ಹಾದಿಯಲ್ಲಿ ಈಗ ಬಿಗ್ ಬಾಸ್ ಸಹ ಸ್ಪರ್ಧಿ ದೀಪಿಕಾ ದಾಸ್ ಕೂಡಾ ನಡೆಯುತ್ತಿದ್ದಾರೆ.ದೀಪಿಕಾ ಚ್ಯಾರಿಟಿಯೊಂದರ ಸದಸ್ಯರ ಸಹಾಯದೊಂದಿಗೆ ತಾವೇ ಸಹಾಯ ಮಾಡಲು ಫೀಲ್ಡಿಗಿಳಿದಿದ್ದು, ಸಂಕಷ್ಟಪೀಡಿತರಿಗೆ ಅಗತ್ಯ ವಸ್ತುಗಳ ಪೂರೈಕೆ ಮಾಡಲು ಹೊರಟಿದ್ದಾರೆ.ಅಷ್ಟೇ ಅಲ್ಲದೆ, ನಮ್ಮ ಸಹಾಯಕ್ಕೆ ಕೈ ಜೋಡಿಸಿ ಎಂದು ಧನ ಸಹಾಯ ಕೇಳಿದ್ದಾರೆ.