ಬಾಲಿವುಡ್ ನಟಿ ದೀಪಿಕಾ ಪಡುಕೋಣೆ ಮತ್ತೊಮ್ಮೆ ತಮ್ಮ ಸಂಭಾವನೆ ವಿಷಯಕ್ಕೆ ಸುದ್ದಿಯಾಗಿದ್ದಾರೆ. ಟಾಲಿವುಡ್ ನಟ ಪ್ರಭಾಸ್ ಜೊತೆ ರಾಧೆ ಶ್ಯಾಮ್ ಸಿನಿಮಾದಲ್ಲಿ ದೀಪಿಕಾ ಪಡುಕೋಣೆ ನಟಿಸೋದು ಪಕ್ಕಾ ಆಗಿದೆ.ಈ ನಡುವೆ ರಾಧೆ ಶ್ಯಾಮ್ ಚಿತ್ರದ ನಟನೆಗಾಗಿ ದೀಪಿಕಾ ಪಡುಕೋಣೆ 20 ಕೋಟಿ ರೂ. ಸಂಭಾವನೆ ಪಡೆದುಕೊಳ್ಳುತ್ತಿದ್ದಾರೆ ಎಂದು ಚರ್ಚೆಯಾಗುತ್ತಿದೆ.ದೀಪಿಕಾ ಮತ್ತು ಪ್ರಭಾಸ್ ಜೋಡಿಯ ಚಿತ್ರ ನೋಡಲು ಅಭಿಮಾನಿಗಳು ಈಗಿನಿಂದಲೇ ಕಾತುರರಾಗಿದ್ದಾರೆ.