ಶಿವಮೊಗ್ಗ: ಇತ್ತೀಚೆಗಷ್ಟೇ ಕೊಲೆಯಾಗಿದ್ದ ಹಿಂದೂ ಕಾರ್ಯಕರ್ತ ಹರ್ಷ ಕುಟುಂಬಸ್ಥರಿಗೆ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಸಹಾಯ ಮಾಡಿದ್ದಾರೆ.ಸ್ನೇಹಿತ ಪ್ರಥಮ್ ಮೂಲಕ ಧ್ರುವ ಸರ್ಜಾ ಹರ್ಷ ಅವರ ತಾಯಿಗೆ ಧನ ಸಹಾಯ ಮಾಡಿದ್ದಾರೆ. ಈ ವಿಚಾರವನ್ನು ಖುದ್ದು ಪ್ರಥಮ್ ಮಾಧ್ಯಮಗಳ ಮುಂದೆ ಹಂಚಿಕೊಂಡಿದ್ದಾರೆ.ಹರ್ಷ ಅವರನ್ನು ವಾಪಸ್ ತಂದುಕೊಡಲಂತೂ ನಮ್ಮಿಂದ ಸಾಧ್ಯವಿಲ್ಲ. ಆದರೆ ನಾವು ಏನಾದರೂ ಮಾಡಬೇಕು. ಒಂದು ನಾಲ್ಕೈದು ಲಕ್ಷ ಹಣ ಕೊಡೋಣ, ಅವರಿಗೆ ಸಹಾಯವಾಗುತ್ತದೆ ಎಂದು ಧ್ರುವ ಸರ್ಜಾ ಹೇಳಿದರು.