ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ಹೊಸ ಸಿನಿಮಾವೊಂದು ಸದ್ದಿಲ್ಲದೇ ಸೆಟ್ಟೇರಿದೆ. ಅದ್ಧೂರಿ ಬಳಿಕ ಮತ್ತೆ ಧ್ರುವ ಸರ್ಜಾ-ಎಪಿ ಅರ್ಜುನ್ ಜೊತೆಯಾಗಿ ಸಿನಿಮಾ ಮಾಡುತ್ತಿದ್ದಾರೆ.ಅದ್ಧೂರಿ ಮೂಲಕ ಧ್ರುವ ಸರ್ಜಾಗೆ ಸ್ಯಾಂಡಲ್ ನಲ್ಲಿ ಭರ್ಜರಿ ಖ್ಯಾತಿ ತಂದುಕೊಟ್ಟ ನಿರ್ದೇಶಕ ಎಪಿ ಅರ್ಜುನ್ ಆಕ್ಷನ್ ಕಟ್ ಹೇಳುತ್ತಿದ್ದರೆ, ಉದಯ್ ಕೆ ಮೆಹ್ತಾ ಬಂಡವಾಳ ಹೂಡುತ್ತಿದ್ದಾರೆ.ಈ ಮೊದಲು ಉದಯ್ ಮೆಹ್ತಾ ನಿರ್ಮಾಣದಲ್ಲಿ ಧ್ರುವ ಸರ್ಜಾ ನಾಯಕರಾಗಿ ನಂದಕಿಶೋರ್ ನಿರ್ದೇಶನದಲ್ಲಿ ‘ಭರ್ಜರಿ’ ಸಿನಿಮಾ ಘೋಷಣೆಯಾಗಿತ್ತು.