ಬೆಂಗಳೂರು: ಪೊಗರು ಸಿನಿಮಾ ವಿವಾದ ಕುರಿತಂತೆ ಮೊನ್ನೆ ಟಿವಿ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದ ಸಂಸದೆ ಶೋಭಾ ಕರಂದ್ಲಾಜೆ ಬಗ್ಗೆ ಧ್ರುವ ಸರ್ಜಾ ಪ್ರತಿಕ್ರಿಯಿಸಿದ್ದಾರೆ. ನಿನ್ನೆ ಪೊಗರು ಚಿತ್ರತಂಡದ ಪತ್ರಿಕಾಗೋಷ್ಠಿಯಲ್ಲಿ ಶೋಭಾ ಕರಂದ್ಲಾಜೆ ಈ ಸಿನಿಮಾದ ದೃಶ್ಯದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ್ದರ ಬಗ್ಗೆ ಪತ್ರಕರ್ತರು ಕೇಳಿದ ಪ್ರಶ್ನೆಗೆ ಧ್ರುವ ‘ಅವರ ಬಗ್ಗೆ ನಾನೇನು ಹೇಳಲಿ? ಅವರೇ ಹೇಳಿದ್ದಾರಲ್ಲಾ? ನಾನು ಸಿನಿಮಾ ನೋಡಿಲ್ಲ, ಟಿವಿಯಲ್ಲಿ ದೃಶ್ಯ ನೋಡಿ ಹೇಳಿಕೆ ಕೊಡ್ತಿದ್ದೀನಿ ಅಂತ. ಸಿನಿಮಾನೇ