ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ಅಭಿನಯದ ‘ಪೊಗರು’ ಸಿನಿಮಾ ತಮಿಳಿನಲ್ಲೂ ಬಿಡುಗಡೆಯಾಗುತ್ತಿದೆ. ಈ ಸಿನಿಮಾದ ಟೈಟಲ್ ನ್ನು ಚಿತ್ರತಂಡ ಬಹಿರಂಗಪಡಿಸಿದೆ. ಪೊಗರು ತಮಿಳಿನಲ್ಲಿ ‘ಸೆಮ್ಮ ತಿಮಿರು’ ಎಂಬ ಟೈಟಲ್ ನಲ್ಲಿ ಬಿಡುಗಡೆಯಾಗಲಿದೆ. ಈ ವಿಚಾರವನ್ನು ಖುದ್ದು ಧ್ರುವ ಸರ್ಜಾ ಸಾಮಾಜಿಕ ಜಾಲತಾಣದಲ್ಲಿ ಪ್ರಕಟಿಸಿದ್ದಾರೆ. ಜೊತೆಗೆ ಜನವರಿ 1 ರಂದು ತಮಿಳು ಡೈಲಾಗ್ ಟೀಸರ್ ಕೂಡಾ ಬಿಡುಗಡೆಯಾಗುತ್ತಿದೆ. ಇತ್ತೀಚೆಗಷ್ಟೇ ಪೊಗರು ಸಿನಿಮಾ ಕೆಲಸದ ನಿಮಿತ್ತ ಮಾವ ಅರ್ಜುನ್ ಸರ್ಜಾ ಜೊತೆಗೆ