ಬೆಂಗಳೂರು: ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ-ನಿರ್ದೇಶಕ ಪ್ರೇಮ್ ಕಾಂಬಿನೇಷನ್ ನ ಹೊಸ ಸಿನಿಮಾ ಕೊನೆಗೂ ಅನೌನ್ಸ್ ಆಗಿದೆ.ಕೆವಿಎನ್ ಪ್ರೊಡಕ್ಷನ್ ನಿರ್ಮಾಣ ಸಂಸ್ಥೆ ಈ ಸಿನಿಮಾಗೆ ಬಂಡವಾಳ ಹೂಡಲಿದೆ. ಆದರೆ ಸಿನಿಮಾದ ಟೈಟಲ್ ಸದ್ಯದಲ್ಲೇ ಘೋಷಣೆ ಮಾಡುವುದಾಗಿ ಚಿತ್ರತಂಡ ಹೇಳಿದೆ.ಕ್ರಿಯೇಟಿವ್ ನಿರ್ದೇಶಕ ಮತ್ತು ಲಕ್ಕಿ ನಾಯಕ ಜೊತೆಯಾಗಿರುವುದರಿಂದ ಹೊಸತನ್ನೇ ನಿರೀಕ್ಷೆ ಮಾಡಲಾಗುತ್ತಿದೆ. ಈ ಬಗ್ಗೆ ರಕ್ಷಿತಾ ಪ್ರೇಮ್ ಕೂಡಾ ಸುಳಿವು ಕೊಟ್ಟಿದ್ದು, ಇಬ್ಬರೂ ಇದುವರೆಗೆ ಮಾಡಿರದ ಹೊಸ ಪ್ರಯತ್ನಕ್ಕೆ ಕೈ ಹಾಕಲಿದ್ದಾರೆ