ಬೆಂಗಳೂರು: ಚಿರಂಜೀವಿ ಸರ್ಜಾ ಮತ್ತು ಧ್ರುವ ಸರ್ಜಾ ರಾಮ-ಲಕ್ಷ್ಮಣರಂತೆ ಇದ್ದವರು. ಆದರೆ ಈಗ ಅಣ್ಣ ಅಕಾಲಿಕವಾಗಿ ಬಿಟ್ಟು ಹೋಗಿರುವುದು ಧ್ರುವ ಸರ್ಜಾಗೆ ಸಹಿಸಲಾಗದಷ್ಟು ನೋವು ತಂದಿದೆ.ಸಂದರ್ಶನವೊಂದರಲ್ಲಿ ನಿಮ್ಮ ಮೊದಲ ಆಯ್ಕೆ ಪ್ರೇರಣನಾ? ಅಣ್ಣ ಚಿರುವಾ? ಅಂತ ಕೇಳಿದ್ದಕ್ಕೆ ಧ್ರುವ ನನಗೆ ಅಣ್ಣನೇ ಎಂದಿದ್ದರು. ಇದು ಪ್ರೇರಣಾಗೂ ಗೊತ್ತು ಎಂದು ಥಟ್ಟನೆ ಉತ್ತರಿಸಿದ್ದರು.ಈಗ ಅಂತಹ ಅಣ್ಣನೇ ಇಲ್ಲದಿರುವ ನೋವು ಧ್ರುವರನ್ನು ಕಾಡುತ್ತಿದೆ. ಅಣ್ಣ ತೀರಿಕೊಂಡ ಬಳಿಕ ಮೊದಲ ಬಾರಿಗೆ ಇನ್ ಸ್ಟಾಗ್ರಾಂನಲ್ಲಿ