ಪೊಗರು ಸಿನಿಮಾ ಬಗ್ಗೆ ಧ್ರು ವ ಸೆಂಟಿಮೆಂಟ್

ಬೆಂಗಳೂರು| Krishnaveni K| Last Modified ಶುಕ್ರವಾರ, 22 ಜನವರಿ 2021 (07:44 IST)
ಬೆಂಗಳೂರು: ಬರೋಬ್ಬರಿ ಮೂರೂವರೆ ವರ್ಷಗಳ ಬಳಿಕ ಬೆಳ್ಳಿತೆರೆಗೆ ಬರುತ್ತಿರುವ ಆಕ್ಷನ್ ಪ್ರಿನ್ಸ್ ಧ್ರುವ ಸರ್ಜಾ ‘ಪೊಗರು’ ಸಿನಿಮಾ ಮೇಲೆ ವಿಶೇಷ ಮಮತೆ ಹೊಂದಿದ್ದಾರೆ.
 

ಈ ಸಿನಿಮಾ ಎಡಿಟಿಂಗ್ ಮಾಡುವಾಗ ಅಣ್ಣ ಚಿರು ಸರ್ಜಾ ನೋಡಿ ಸಾಕಷ್ಟು ಸಲಹೆ ನೀಡಿದ್ದ. ಹೀಗಾಗಿ ಈ ಸಿನಿಮಾವನ್ನು ಅವನಿಗೇ ಅರ್ಪಿಸುತ್ತಿದ್ದೇನೆ ಎಂದು ಧ‍್ರುವ ಹೇಳಿಕೊಂಡಿದ್ದಾರೆ. ಈ ಮೂಲಕ ಈ ಸಿನಿಮಾ ಮೇಲೆ ತಮಗೆ ವಿಶೇಷ ಭಾವನಾತ್ಮಕ ಸಂಬಂಧವಿರುವುದಾಗಿ ಹೇಳಿದ್ದಾರೆ. ಫೆಬ್ರವರಿ 19 ರಂದು ಸಿನಿಮಾ ರಿಲೀಸ್ ಆಗುತ್ತಿದೆ.
ಇದರಲ್ಲಿ ಇನ್ನಷ್ಟು ಓದಿ :