ಬೆಂಗಳೂರು: ಅರ್ಜುನ್ ಸರ್ಜಾ ವಿರುದ್ಧ ಲೈಂಗಿಕ ಕಿರುಕುಳ ಆರೋಪ ಮಾಡಿದ್ದ ನಟಿ ಶೃತಿ ಹರಿಹರನ್ ಗೆ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದರಲ್ಲಿ ದೂರವಾಣಿಯಲ್ಲೇ ಧಮ್ಕಿ ಹಾಕಿದ ನಟ ಧ್ರುವ ಸರ್ಜಾ ಇದೀಗ ಪತ್ರಿಕಾಗೋಷ್ಠಿ ನಡೆಸಲಿದ್ದಾರಂತೆ.ಮಾವ ಅರ್ಜುನ್ ಸರ್ಜಾ ಪರ ನಿಂತಿರುವ ಧ್ರುವ ಸರ್ಜಾ ಶೃತಿ ಹರಿಹರನ್ ವಿರುದ್ಧ ಕಿಡಿ ಕಾರಿದ್ದಲ್ಲದೆ, ಅವರನ್ನು ಬೆಂಬಲಿಸುತ್ತಿರುವ ಚೇತನ್ ವಿರುದ್ಧವೂ ಗುಡುಗಿದ್ದಾರೆ. ಸತ್ಯ ತಿಳಿದುಕೊಳ್ಳದೇ ನಿನ್ನ ಲಾಭಕ್ಕೆ ಏನೇನೋ ಹೇಳಬೇಡ ಎಂದು ಚೇತನ್ ವಿರುದ್ಧ ಕಿಡಿ