ಬೆಂಗಳೂರು: ಕೊಡಗಿನ ಬೆಡಗಿ, ಈಗ ತೆಲುಗು, ತಮಿಳಿನಲ್ಲೂ ಮನೆ ಮಾತಾಗಿರುವ ರಶ್ಮಿಕಾ ಮಂದಣ್ಣ ಸಿನಿಮಾ ಜೀವನಕ್ಕೆ ಕಾಲಿಟ್ಟು ಮೂರು ವರ್ಷವಾಗಿದೆ. ನಿನ್ನೆ ಈ ಸಂಭ್ರಮವನ್ನು ಅವರ ಅಭಿಮಾನಿಗಳು ಸಾಮಾಜಿಕ ಜಾಲತಾಣದಲ್ಲಿ ಆಚರಿಸಿಕೊಂಡಿದ್ದಾರೆ.ಈ ಹಿನ್ನಲೆಯಲ್ಲಿ ರಶ್ಮಿಕಾಗೆ ಶುಭಾಷಯಗಳ ಮಹಾಪೂರವೇ ಹರಿದುಬಂದಿದೆ. ಈ ನಡುವೆ ಒಬ್ಬರು ರಶ್ಮಿಕಾ ಹಿಟ್ ಸಿನಿಮಾಗಳ ಪಟ್ಟಿ ಮಾಡಿ ವಿಶ್ ಮಾಡಿದ್ದಾರೆ. ಆದರೆ ಇದರಲ್ಲಿ ಕನ್ನಡ ಸಿನಿಮಾಗಳ ಹೆಸರಿಲ್ಲ. ಈ ಶುಭಾಷಯಕ್ಕೆ ಪ್ರತಿಕ್ರಿಯಿಸಿರುವ ರಶ್ಮಿಕಾ ಹಿಟ್ ಲಿಸ್ಟ್ ನಲ್ಲಿ