ಬೆಂಗಳೂರು: ಸಿನಿಮಾಗಳಲ್ಲಿ ಪೊಲೀಸ್ ಅಧಿಕಾರಿಯ ವೈಭವವನ್ನು ನೋಡಿದ್ದೇವೆ. ಆದರೆ ಇದೀಗ ನಿಜ ಜೀವನದಲ್ಲೇ ಪೊಲೀಸ್ ಅಧಿಕಾರಿಯಾಗಿ ಮಿಂಚಿದ ಡಿಐಜಿ ರೂಪಾ ಅವರ ಕತೆ ಸದ್ಯದಲ್ಲೇ ಬೆಳ್ಳಿ ತೆರೆಗೆ ಬರಲಿದೆಯಂತೆ!ಪರಪ್ಪನ ಅಗ್ರಹಾರ ಜೈಲಿನ ಕರ್ಮಕಾಂಡಗಳನ್ನು ಬಯಲಿಗೆಳೆದ ನಂತರ ಜನ ಸಾಮಾನ್ಯರ ಪಾಲಿಗೆ ಹೀರೋಯಿನ್ ಆದ ಐಪಿಎಸ್ ಅಧಿಕಾರಿ ಡಿಐಜಿ ರೂಪಾ ಸಾಹಸಗಾಥೆಗಳನ್ನು ತೆರೆಯ ಮೇಲೆ ಸಿನಿಮಾ ರೂಪದಲ್ಲಿ ತರಲು ನಿರ್ದೇಶಕ ಎಎಂಆರ್ ರಮೇಶ್ ಸಿದ್ಧತೆ ನಡೆಸಿದ್ದಾರೆ.ಸೈನೈಡ್ ಸಿನಿಮಾ ಖ್ಯಾತಿಯ ನಿರ್ದೇಶಕ ರಮೇಶ್