ಬೆಂಗಳೂರು: ಗೋವಾದಲ್ಲಿ ಪ್ರವಾಸ ಹೋಗಿದ್ದಾಗ ಕುತ್ತಿಗೆಗೆ ಪೆಟ್ಟು ಮಾಡಿಕೊಂಡು ಶಸ್ತ್ರಚಿಕಿತ್ಸೆಗೊಳಗಾಗಿದ್ದ ನಟ ದಿಗಂತ್ ಮಂಚಾಲೆ ಈಗ ಸಂಪೂರ್ಣ ಗುಣಮುಖರಾಗಿದ್ದಾರೆ.ಗೋವಾದಿಂದ ಏರ್ ಲಿಫ್ಟ್ ಮಾಡಿ ದಿಗಂತ್ ಗೆ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ತಕ್ಷಣವೇ ಕುತ್ತಿಗೆಗೆ ಶಸ್ತ್ರಚಿಕಿತ್ಸೆ ನೀಡಲಾಗಿತ್ತು. ಎರಡು ವಾರಗಳ ಕಾಲ ವಿಶ್ರಾಂತಿ ಪಡೆದಿದ್ದ ದಿಗಂತ್ ಈಗ ಮತ್ತೆ ಆಕ್ಟಿವ್ ಆಗಿದ್ದಾರೆ.ನಿನ್ನೆ ಗಾಳಿಪಟ 2 ಹಾಡಿನ ಲಾಂಚ್ ಕಾರ್ಯಕ್ರಮಕ್ಕೆ ಆಗಮಿಸಿದ್ದ ದಿಗಂತ್ ಇಂದು ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಸೈಕ್ಲಿಂಗ್ ಮಾಡುವ ಫೋಟೋಗಳನ್ನು