ಬೆಂಗಳೂರು: ಮನಸಾರೆ ಪ್ರೀತಿಸಿದ ಸ್ಯಾಂಡಲ್ ವುಡ್ ನ ಹಾಟ್ ಜೋಡಿ ದಿಗಂತ್-ಐಂದ್ರಿತಾ ರೇ ಮದುವೆ ಇಂದು ಬೆಂಗಳೂರಿನ ನಂದಿ ಬೆಟ್ಟದ ಸಮೀಪ ರೆಸಾರ್ಟ್ ನಲ್ಲಿ ನಡೆಯಲಿದೆ.ನಿನ್ನೆಯಿಂದಲೇ ಆಂಡಿ-ದಿಗ್ಗಿ ಮದುವೆಯ ಸಂಭ್ರಮ ಶುರುವಾಗಿತ್ತು. ಅರಿಶಿಣ ಶಾಸ್ತ್ರ, ಸಂಗೀತ್ ಕಾರ್ಯಕ್ರಮಗಳು ನಿನ್ನೆ ನಡೆದಿವೆ. ಇಂದು ಸಂಜೆ ಇಬ್ಬರೂ ಹಸೆಮಣೆ ಏರಲಿದ್ದಾರೆ.ನಿಸರ್ಗದ ಮಡಿಲಲ್ಲಿ ಸಪ್ತಪದಿ ತುಳಿಯಬೇಕೆಂಬುದು ಈ ಜೋಡಿಯ ಆಸೆ. ಅದೇ ಕಾರಣಕ್ಕೆ ಇವರ ಮದುವೆ ನಂದಿ ಬೆಟ್ಟದ ಸಮೀಪ ರೆಸಾರ್ಟ್ ನಲ್ಲಿ ನಡೆಯುತ್ತಿದೆ.