ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆಗೆ ಹಾಜರಾಗಿರುವ ದಿಗಂತ್-ಐಂದ್ರಿತಾ ದಂಪತಿಯನ್ನು ಕಳೆದ ಎರಡು ಗಂಟೆಗಳಿಂದ ಸಿಸಿಬಿ ಪ್ರಶ್ನೆಗಳ ಮೇಲೆ ಪ್ರಶ್ನೆ ಮಾಡುತ್ತಿದೆ. ದಿಗಂತ್-ಐಂದ್ರಿತಾ ಬಗ್ಗೆ ಸಾಕಷ್ಟು ಸಾಕ್ಷ್ಯ ಕಲೆ ಹಾಕಿರುವ ಸಿಸಿಬಿ ಅಧಿಕಾರಿಗಳು ಇಬ್ಬರನ್ನೂ ಪ್ರತ್ಯೇಕವಾಗಿ ಕೂರಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ. ಸಿಸಿಬಿ ಕಚೇರಿಗೆ ಆಗಮಿಸಿದ ತಕ್ಷಣ ಇಬ್ಬರ ಮೊಬೈಲ್ ಗಳನ್ನೂ ವಶಪಡಿಸಿಕೊಳ್ಳಲಾಗಿದೆ. ಇಬ್ಬರೂ ಮೊಬೈಲ್ ನಲ್ಲಿ ಸಿಮ್ ಬಳಸದೇ ವೈಫೈ ಮೂಲಕ ಬಳಕೆ ಮಾಡುತ್ತಿದ್ದರು ಎನ್ನಲಾಗಿದೆ. ಇಬ್ಬರೂ ಸಿಂಥಟಿಕ್