ಬೆಂಗಳೂರು: ಡ್ರಗ್ ಮಾಫಿಯಾ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಸಿಬಿ ತನಿಖೆ ಎದುರಿಸುತ್ತಿರುವ ನಟ ದಿಗಂತ್ ತಾವು ಒಪ್ಪಿಕೊಂಡಿರುವ ಸಿನಿಮಾ ಶೂಟಿಂಗ್ ಗೆ ಅಡ್ಡಿ ಮಾಡದೇ ಇರಲು ತೀರ್ಮಾನಿಸಿದ್ದಾರೆ.ಸಿಸಿಬಿ ವಿಚಾರಣೆಯಿಂದಾಗಿ ದಿಗಂತ್ ಈಗ ಬೆಂಗಳೂರು ಬಿಟ್ಟು ಹೊರಗೆಲ್ಲೂ ಹೋಗುವ ಹಾಗಿಲ್ಲ. ಆದರೆ ಈ ನಡುವೆ ದಿಗಂತ್ ಮಾರಿಗೋಲ್ಡ್ ಸಿನಿಮಾ ಶೂಟಿಂಗ್ ಹಾಜರಾಗಲಿದ್ದಾರೆ ಎಂದು ಪತ್ನಿ ಐಂದ್ರಿತಾ ಮಾಧ್ಯಮಗಳಿಗೆ ಹೇಳಿಕೆ ನೀಡಿದ್ದಾರೆ. ತಮ್ಮ ನಿವಾಸದಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯಿಸಿರುವ ಐಂದ್ರಿತಾ ನಾವು ರೂಲ್ಸ್ ಫಾಲೋ ಮಾಡ್ಬೇಕಾಗುತ್ತದೆ.