ಬೆಂಗಳೂರು : ಸ್ಯಾಂಡಲ್ ವುಡ್ ನಟ ದರ್ಶನ್ ಅವರ ಸಹೋದರ ದಿನಕರ ತೂಗುದೀಪ ಸಂಚರಿಸುತ್ತಿದ್ದ ಕಾರು ಭಾನನುವಾರದಂದು ಅಪಘಾತಕ್ಕೀಡಾಗಿದೆ. ಯಲಹಂಕದಲ್ಲಿ ನಡೆದ ಪುರುಸೋತ್ ರಾಮ ಚಿತ್ರದ ಮುಹೂರ್ತ ಸಮಾರಂಭಕ್ಕೆ ಹೋಗುತ್ತಿದ್ದ ವೇಳೆ ದಿನಕರ್ ಅವರ ಕಾರಿಗೆ ಅನಿರೀಕ್ಷಿತವಾಗಿ ಬೈಕೊಂದು ಎದುರಾದ ಕಾರಣ ಈ ಘಟನೆ ಸಂಭವಿಸಿದೆ. ಅಪಘಾತದಿಂದಾಗಿ ವಾಹನಗಳಿಗೆ ಸಣ್ಣಪುಟ್ಟ ಏಟಾಗಿದ್ದು ಬಿಟ್ಟರೆ ಅದೃಷ್ಟವಶಾತ್ ಸವಾರರಿಗೆ ಯಾವುದೇ ಏಟಾಗಿಲ್ಲ. ದಿನಕರ್ ತೂಗುದೀಪ ಅವರು ಕೂಡ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ತಾಜಾ ಸುದ್ದಿಗಳನ್ನು