ಬೆಂಗಳೂರು: ಅಣ್ಣಾವ್ರ ಸಿನಿಮಾವನ್ನು ಜನಪ್ರಿಯತೆ ಪಡೆಯುವ ಉದ್ದೇಶಕ್ಕೆ ಕೆಲವರು ಮರುಬಳಕೆ ಮಾಡುತ್ತಿರುವುದರ ಬಗ್ಗೆ ಹಿಂದೊಮ್ಮೆ ಡಾ.ರಾಜ್ ಪುತ್ರ ರಾಘವೇಂದ್ರ ರಾಜಕುಮಾರ್ ಧ್ವನಿ ಎತ್ತಿದ್ದರು. ಇದೀಗ ಅಣ್ಣಾವ್ರ ಸೂಪರ್ ಹಿಟ್ ಸಿನಿಮಾ ಕಸ್ತೂರಿ ನಿವಾಸ ಟೈಟಲ್ ಮರುಬಳಕೆ ಮಾಡಲು ಹೊರಟಿರುವ ನಿರ್ದೇಶಕ ದಿನೇಶ್ ಬಾಬು ವಿವಾದಕ್ಕೆ ಸಿಲುಕಿದ್ದಾರೆ. ದಿನೇಶ್ ಬಾಬು ಹಿರಿಯ ನಿರ್ದೇಶಕ. ಅವರು ಅಣ್ಣಾವ್ರ ಸಿನಿಮಾ ಟೈಟಲ್ ಗೆ ಕಳಂಕ ತರಲ್ಲ ಎಂಬ ನಂಬಿಕೆಯಿದೆಯಾದರೂ, ಇದು ಅಣ್ಣಾವ್ರ ಟ್ರೇಡ್ ಮಾರ್ಕ್