ಬೆಂಗಳೂರು: ಅದ್ಧೂರಿ, ಕಿಸ್ ಸಿನಿಮಾ ಖ್ಯಾತಿಯ ನಿರ್ದೇಶಕ ಎಪಿ ಅರ್ಜುನ್ ಲಾಕ್ ಡೌನ್ ನಡುವೆಯೂ ಆಪ್ತೇಷ್ಟರ ಸಮ್ಮುಖದಲ್ಲಿ ಸರಳವಾಗಿ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಇಂದು ಎಪಿ ಅರ್ಜುನ್ ಮನೆಯಲ್ಲೇ ಸರಳವಾಗಿ ಕುಟುಂಬಸ್ಥರ ಸಮ್ಮುಖದಲ್ಲಿ ಅನ್ನಪೂರ್ಣ ಅವರ ಜತೆ ಅರ್ಜುನ್ ವಿವಾಹ ಸಮಾರಂಭ ನೆರವೇರಿದೆ.ಈ ವಿವಾಹ ಕಾರ್ಯಕ್ರಮಕ್ಕೆ ನಟ ಧ್ರುವ ಸರ್ಜಾ ದಂಪತಿ ಭಾಗವಹಿಸಿ ವಧೂವರರಿಗೆ ಶುಭ ಹಾರೈಸಿದ್ದಾರೆ. ಲಾಕ್ ಡೌನ್ ಕಾರಣ, ಉಳಿದಂತೆ ಚಿತ್ರರಂಗದ ಗಣ್ಯರು ವಿವಾಹ ಸಮಾರಂಭಕ್ಕೆ ಆಗಮಿಸಿರಲಿಲ್ಲ.