ಸ್ಟಾರ್ ನಟನ ಈ ಮಾತು ಕೇಳಿ ನಿರ್ದೇಶಕ ಗೋಪಿಚಂದ್ ಫುಲ್ ಖುಷ್!

krack still
ಹೈದರಾಬಾದ್| pavithra| Last Updated: ಶುಕ್ರವಾರ, 22 ಜನವರಿ 2021 (11:19 IST)
ಹೈದರಾಬಾದ್ : ರವಿ ತೇಜ ಅಭಿನಯದ ಗೋಪಿಚಂದ್ ಮಾಲಿನೇನಿ ನಿರ್ದೇಶನದ ಚಿತ್ರ ‘ಕ್ರ್ಯಾಕ್’ ಜನವರಿ 9ರಂದು ಸಂಕ್ರಾಂತಿ ಹಬ್ಬದ ವಿಶೇಷವಾಗಿ ಬಿಡುಗಡೆಯಾಗಿ ಉತ್ತಮ ಪ್ರತಿಕ್ರಿಯೆ ಪಡೆದುಕೊಂಡಿದೆ.

ಕ್ರ್ಯಾಕ್ ಚಿತ್ರದ ಬಗ್ಗೆ ಅನೇಕ ಸಿನಿ ಸೆಲೆಬ್ರಿಟಿಗಳು ಚಿತ್ರತಂಡವನ್ನು ಅಭಿನಂದಿಸಿದ್ದಾರೆ. ಮೆಗಾಸ್ಟಾರ್ ಚಿರಂಜೀವಿ ಅವರು ನಿರ್ದೇಶಕ ಗೋಪಿಚಂದ್ ಮಾಲಿನೇನಿ ಬಗ್ಗೆ ಮೆಚ್ಚುಗೆಯ ಮಾತನಾಡಿ ಕರೆದು ಅಭಿನಂದಿಸಿದರು. ಈ ಬಗ್ಗೆ ಸಂತೋಷಗೊಂಡ ನಿರ್ದೇಶಕ ಗೋಪಿ ಚಂದ್ , ಚಿರಂಜೀವಿ ನನ್ನ ಕೆಲಸವನ್ನು ಮೆಚ್ಚಿದ್ದಾರೆ. ಅವರ ಮಾತುಗಳನ್ನು ಕೇಳಿ ನನ್ನ ಮನಸ್ಸು ಆಕಾಶದಲ್ಲಿ ತೇಲಿದಂತೆ ಭಾಸವಾಗುತ್ತಿದೆ. ಇದು ಚಂದ್ರನ ಮೇಲೆ ಹೆಜ್ಜೆ ಇಟ್ಟಂತಾಗಿದೆ ಎಂದು ತಿಳಿಸುವುದರ ಮೂಲಕ ಸಂಭ್ರಮಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :