ಬೆಂಗಳೂರು: ಹಿಂದಿ ಹೇರಿಕೆ ಬಗ್ಗೆ ಇತ್ತೀಚೆಗೆ ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಯಾಗುತ್ತಿದೆ. ಈ ನಡುವೆ ಸ್ಯಾಂಡಲ್ ವುಡ್ ನಿರ್ದೇಶಕ ಕೆಎಂ ಚೈತನ್ಯ ತಮಗಾದ ಅನುಭವದ ಬಗ್ಗೆ ಹೇಳಿಕೊಂಡಿದ್ದಾರೆ. ಬೆಳ್ಳಂ ಬೆಳಿಗ್ಗೆ ಟಾಟಾ ಸ್ಕೈ ಸಿಬ್ಬಂದಿ ಹುಡುಗಿಯೊಬ್ಬಳು ಕರೆ ಮಾಡಿ ಏಕಾ ಏಕಿ ಹಿಂದಿಯಲ್ಲಿ ಮಾತನಾಡಿದಳು. ನನಗೆ ಹಿಂದಿ ಸಿನಿಮಾ, ಹಾಡುಗಳೆಂದರೆ ಇಷ್ಟ. ಆದರೆ ನನಗೆ ಆ ಭಾಷೆ ಬರುತ್ತದೋ ಇಲ್ಲವೋ ಎಂದು ಗೊತ್ತಿಲ್ಲದೇ ಆಕೆ ಇಷ್ಟುದ್ದ ಮಾತನಾಡಿದಾಗ ನಾನು ಅರ್ಧದಲ್ಲಿ