ಬೆಂಗಳೂರು: ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅಭಿನಯಿಸಲಿರುವ ಹೊಸ ಸಿನಿಮಾ ‘ದ್ವಿತ’ ಪೋಸ್ಟರ್ ಡಿಸೈನ್ ಬಗ್ಗೆ ಉಂಟಾದ ವಿವಾದದ ಬಗ್ಗೆ ಕ್ಷಮೆ ಕೇಳಿದ್ದಾರೆ. ‘ಮೂಲ ಪೋಸ್ಟರ್ ನ್ನು ನಾನು ನೋಡಿರಲಿಲ್ಲ. ಹೀಗಾಗಿ ಪೋಸ್ಟರ್ ನೋಡಿದಾಗ ಇಷ್ಟವಾಯಿತು. ಮೊದಲೇ ಗೊತ್ತಿದ್ದರೆ ಬಳಸುತ್ತಿರಲಿಲ್ಲ. ಕಾನೂನಿನ ಪ್ರಕಾರವೇ ಆದರ್ಶ್ ಈ ಪೋಸ್ಟರ್ ಡಿಸೈನ್ ಮಾಡಿದ್ದರೂ ಈ ರೀತಿ ಆಗಿದ್ದು ದುರದೃಷ್ಟಕರ’ ಎಂದಿದ್ದಾರೆ.‘ಪ್ರೇಕ್ಷಕರ ಜಾಗದಲ್ಲಿ ನಾನಿದ್ದರೂ ಇದು ಕಾಪಿ ಎಂಬ ಅನುಮಾನ ಮೂಡುವುದು ಸಹಜ. ಹೀಗಾಗಿಯೇ