ಜನ್ಮ ದಿನವನ್ನು ತನ್ನ ಸಾವಿನ ದಿನವೆಂದ ನಿರ್ದೇಶಕ ಆರ್ ಜಿವಿ. ಯಾಕೆ ಗೊತ್ತಾ?

ಹೈದರಾಬಾದ್| pavithra| Last Updated: ಗುರುವಾರ, 8 ಏಪ್ರಿಲ್ 2021 (11:38 IST)
ಹೈದರಾಬಾದ್ : ವಿವಾದಾತ್ಮಕ ನಿರ್ದೇಶಕರೆಂದೆ ಪ್ರಸಿದ್ಧರಾದ ರಾಮ್ ಗೋಪಾಲ್ ವರ್ಮಾ ಅವರು ಏನೇ ಮಾಡಿದರೂ ಅದು ಸುದ್ದಿಯಾಗುತ್ತದೆ. ಇದೀಗ ಅವರು ತಮ್ಮ ಬರ್ತ್ ಡೇಯಂದು ಮಾಡಿದ ಟ್ವೀಟ್ ಈಗ ವೈರಲ್ ಆಗಿದೆ.

ಹೌದು . ನಿರ್ದೇಶಕ ರಾಮ್ ಗೋಪಾಲ್ ವರ್ಮಾ ಅವರು ಟ್ವೀಟ್ ಮಾಡಲಿ, ಪೋಸ್ಟ್ ಮಾಡಲಿ, ಅಥವಾ ಟ್ರೈಲರ್ ಅನ್ನು ಬಿಡುಗಡೆ ಮಾಡಲಿ. ಅದರ ಬಗ್ಗೆ ಬಿಸಿ ಚರ್ಚೆಯಾಗುವುದು ಸಾಮಾನ್ಯ. ಏಪ್ರಿಲ್ 7ರಂದು ರಾಮ್ ಗೋಪಾಲ್ ವರ್ಮಾ ಅವರು ಜನ್ಮ ದಿನವನ್ನು ಆಚರಿಸಿಕೊಂಡಿದ್ದಾರೆ. ಈ ಸಂದರ್ಭದಲ್ಲಿ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಅವರಿಗೆ ಶುಭಾಶಯ ತಿಳಿಸಿದ್ದಾರೆ.

ಆದರೆ ಇದಕ್ಕೆ ನಿರ್ದೇಶಕ ಆರ್ ಜಿವಿ ಧನ್ಯವಾದ ಹೇಳುವ ಬದಲು ಟ್ವೀಟರ್ ನಲ್ಲಿ “ಇಂದು ನನ್ನ ಜನ್ಮ ದಿನವಲ್ಲ, ಇಂದು ನನ್ನ ಸಾವಿನ ದಿನವಾಗಿದೆ. ಏಕೆಂದರೆ ನನ್ನ ಜೀವನದಲ್ಲಿ ಇನ್ನು ಒಂದು ವರ್ಷ ಸತ್ತು ಹೋಯಿತು” ಎಂದು ತಮ್ಮದೇ ಶೈಲಿಯಲ್ಲಿ ಪ್ರತಿಕ್ರಿಯಿಸಿದ್ದಾರೆ.ಇದರಲ್ಲಿ ಇನ್ನಷ್ಟು ಓದಿ :