ಬೆಂಗಳೂರು : ಕನ್ನಡದ ಖ್ಯಾತ ನಿರ್ದೇಶಕ ಯೋಗರಾಜ್ ಭಟ್ ಅವರ ಫೋಟೋವನ್ನು ರಾಜಕೀಯವಾಗಿ ಬಳಕೆ ಮಾಡಿಕೊಳ್ಳುತ್ತಿರು ಹಿನ್ನಲೆಯಲ್ಲಿ ಇದೀಗ ನಿರ್ದೇಶಕ ಯೋಗರಾಜ್ ಭಟ್ ಅವರು ಅಧಿಕೃತ ಘೋಷಣೆಯೊಂದನ್ನು ಹೊರಡಿಸಿದ್ದಾರೆ. ಇತ್ತೀಚೆಗಷ್ಟೇ ಯೋಗರಾಜ್ ಭಟ್ ಹಾಗೂ ಅವರ ತಂಡ ಸೇರಿ ಮತದಾನದ ಕುರಿತಾಗಿ ಸರ್ಕಾರಕ್ಕೆ ಹಾಡನ್ನು ಚಿತ್ರೀಕರಿಸಿಕೊಟ್ಟಿದ್ದರು. ಇದೇ ಕಾರಣಕ್ಕೆ ಕೆಲವರು ಭಟ್ಟರು ರಾಜಕೀಯ ಪಕ್ಷ ಸೇರುತ್ತಾರೆ ಎಂದುಕೊಂಡು ಅವರ ಹೆಸರು ಹಾಗೂ ಫೋಟೋವನ್ನು ರಾಜಕೀಯವಾಗಿ ಉಪಯೋಗಿಸಿಕೊಂಡಿದ್ದಾರೆ. ಇದನ್ನು ನೋಡಿ ಪ್ರತಿಕ್ರಿಯಿಸಿದ